ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪಠ್ಯ ವಿಷಯವಿದೆ. ಆದರೆ ಇದೇ ಜ್ಞಾನದ ಹಸಿವೆಯನ್ನು ನೀಗಿಸಲಾರದು. ಜೊತೆಗೆ ಶಾಲೆಯಲ್ಲಿ ನಡೆಯುವ ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಆಸಕ್ತಿಯಿಂದ ಭಾಗವಹಿಸಿದಲ್ಲಿ ಮಕ್ಕಳ ಜ್ಞಾನದ ಹರವು ಹೆಚ್ಚುವುದೂ ಅಲ್ಲದೆ ಪಾಠದಲ್ಲಿಯೂ ಆಸಕ್ತಿ ಮೂಡುತ್ತದೆ.
Display Board:-ಪ್ರತಿ ತರಗತಿಗೆ ಒಂದು Display Boardಇರಿಸಿದೆ. ಇದರಲ್ಲಿ ಮಕ್ಕಳು ಡ್ರಾಯಿಂಗ್, ಕವನ, ಕಥೆ,ಲೇಖನಗಳನ್ನು ಬರೆಯಬಹುದು. ಅವಶ್ಯಕತೆಇದ್ದಲ್ಲಿ ಮನೆಯವರ ಸಹಾಯ ಪಡೆಯಬಹುದು. ಕ್ರೀಡೆ:-ಸಂಜೆ೪.೪೫ ರಿಂದ ೫.೩೦ ರವರಗೆ ಶಾಲೆಯಲ್ಲಿ ಆಟವಾಡಬಹುದು.
ಭಜನೆ:-ಪ್ರತಿ ಶನಿವಾರ ಶಾಲೆಯಲ್ಲಿ ಭಜನೆ ಮಾಡಿಸಲಾಗುತ್ತದೆ. ಇದು ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡುತ್ತದೆ.
ಹುಟ್ಟು ಹಬ್ಬ-ಪ್ರತಿ ತಿಂಗಳು ಆಯಾ ತಿಂಗಳಲ್ಲಿ ಹುಟ್ಟಿದ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ. ಇದರಲ್ಲಿ ಎಲ್ಲರೂ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ
ವಿಶೇಷ ಉಪನ್ಯಾಸಗಳು- ವರ್ಷದಲ್ಲಿ ಕೆಲವು ಉಪನ್ಯಾಸಗಳನ್ನು ನಡೆಸಲಾಗುತ್ತದೆ. ನಮ್ಮ ಸಂಸ್ಕೃತಿಯ ಪರಿಚಯದ ದೃಷ್ಟಿಯಿಂದ ಪುರಾಣ ಕಥೆ, ಪೌರಾಣಿಕಪಾತ್ರಚಿತ್ರಣ, ಕ್ರಾಂತಿಕಾರಿಗಳ ಜೀವನಚರಿತ್ರೆ ಮೊದಲಾದವುಗಳನ್ನು ತಿಳಿಸಿಕೊಡಲಾಗುವುದು.
Science Club:-ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟ ಉಪನ್ಯಾಸ ಕಾರ್ಯಕ್ರಮ ನಡೆಸಲಾಗುತ್ತದೆ. ವಿಜ್ಞಾನದಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಇನ್ನಷ್ಟು ತಿಳಿಯಲು ಸಹಕಾರಿಯಾಗುತ್ತದೆ.
Library:- ಶಾಲೆಯಲ್ಲಿ ಸಾಕಷ್ಟು ಪುಸ್ತಕಗಳಿವೆ. ತರಗತಿಯ Library Period ನಲ್ಲಿ ಓದಬಹುದು. ಅಲ್ಲದೆ ಮನೆಗೂ ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿದೆ.
Reading Club- ವರ್ಷದಲ್ಲಿ 3 - 4 ಬಾರಿ ಬೇರೆ ಬೇರೆ ಪುಸ್ತಕದ ಪರಿಚಯ ಮಾಡಿಸಲಾಗುತ್ತದೆ. ಅದರಲ್ಲಿ ಒಂದು ಪುಸ್ತಕದ ಬಗ್ಗೆ ಮಾತನಾಡಬಹುದು. ಅದರಲ್ಲಿ ಭಾಗವಹಿಸುವುದರಿಂದ ಜ್ಞಾನ ಹೆಚ್ಚುವುದಲ್ಲದೆ ಅನೇಕ ಪುಸ್ತಕ, ವ್ಯಕ್ತಿ, ಪರಿಸರಗಳ ಪರಿಚಯವಾಗುತ್ತದೆ.
English Activity Club :-English ಜ್ಞಾನ ಹೆಚ್ಚಿಸಲು English Activity Club ನಡೆಸಲಾಗುತ್ತದೆ. English ಪುಸ್ತಕ ವಿಮರ್ಶೆ ಮಾಡುವುದಲ್ಲದೇ, ಭಾಷಾ ವೈಶಿಷ್ಟ್ಯ ದ ಬಗ್ಗೆಯೂ ಉಪನ್ಯಾಸಗಳನ್ನು ನಡೆಸಲಾಗುತ್ತದೆ. ಇವುಗಳಲ್ಲಿ ಭಾಗವಹಿಸುವುದರಿಂದ ಭಾಷಾ ಕೌಶಲ್ಯ ಹೆಚ್ಚುವುದು.
ಮಹಾ ಪುರುಷರಜನ್ಮದಿನ:-ವರ್ಷದಲ್ಲಿದೇಶ ವಿದೇಶಗಳ ಅನೇಕ ಸಾಧಕರ ಪರಿಚಯ ಮಾಡಿಕೊಡಲಾಗುತ್ತದೆ. ಈ ವ್ಯಕ್ತಿಗಳ ಬಗ್ಗೆ ನಡೆಸುವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸು. ಇವರ ಬಗ್ಗೆ ಹೆಚ್ಚು ತಿಳಿಯುವುದರಿಂದ ಸಾಧನೆಯ ಮಹತ್ವ, ಅದಕ್ಕೆ ಇರಬೇಕಾದ ಮನೋಭಾವ ಮತ್ತು ಬೇಕಾದ ಪರಿಶ್ರಮದ ಬಗ್ಗೆ ಅರಿವು ಮೂಡುತ್ತದೆ.
ಶಿಕ್ಷಕರ ಸಂಪರ್ಕ:-ಇದೊಂದು ನಮ್ಮ ಶಾಲೆಯ ಪ್ರಮುಖ ಅಂಶ. ವಿದ್ಯಾರ್ಥಿಯು ಶಿಕ್ಷಕರ ಸಂಪರ್ಕದಲ್ಲಿದ್ದು,ಯಾವುದೇ ತೊಂದರೆಯಿದ್ದಲ್ಲಿ ಅವರೊಂದಿಗೆ ಹಂಚಿಕೊಳ್ಳು ಮುಕ್ತ ಅವಕಾಶವಿದೆ .
ಶಾಲಾ ಪ್ರವಾಸ- ಪ್ರತಿವರ್ಷ ತರಗತಿವಾರು ಪ್ರವಾಸ ಕೈಗೊಳ್ಳಲಾಗುತ್ತದೆ. ನಾವು ಒಟ್ಟಿಗೆ ನಾಲ್ಕು ಹೆಜ್ಜೆ ಹಾಕುವ ಸುಸಂದರ್ಭ. ಇಲ್ಲಿ ನೋಡುವ ಸ್ಥಳ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ನಾವೆಲ್ಲ ಒಟ್ಟಿಗೆ ಇದ್ದು ಸಂತೋಷದಿಂದ ನಲಿಯುವುದು. ಸಂತೋಷದಿಂದಿರುವುದು ವಿದ್ಯಾರ್ಥಿಯ ಹಕ್ಕು ಮತ್ತು ಕರ್ತವ್ಯ .
ರಾಮಾಯಣ, ಮಹಾಭಾರತ ಮತ್ತು ಸಂಸ್ಕೃತಿಜ್ಞಾನ ಪರೀಕ್ಷೆ:-ನಮ್ಮ ಭಾರತೀಯ ಸಂಸ್ಕೃತಿಯ ಪರಿಚಯದ ದೃಷ್ಟಿಯಿಂದ ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ .
ಶಾಲಾ ಹಬ್ಬಗಳು- ರಕ್ಷಾಬಂಧನ,ಸಂಕ್ರಾಂತಿ ಇತ್ಯಾದಿ ಹಬ್ಬಗಳನ್ನು ಸಂಭ್ರಮದಿಂದ ಶಾಲೆಯಲ್ಲಿ ಆಚರಿಸುತ್ತೇವೆ.
History awareness Programme:ಇತಿಹಾಸವನ್ನು ಮತ್ತು ಐತಿಹಾಸಿಕ ಪುರುಷರನ್ನು ಮತ್ತು ಅವರ ಮಹತ್ತರ ಕಾರ್ಯಗಳನ್ನು ನೆನಪಿಸಿಕೊಳ್ಳಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ರಜಾ ಕಾಲದ ಶಿಬಿರ - -ಬೇಸಿಗೆ ರಜೆಯಲ್ಲಿ ಅನೇಕ ಶಿಬಿರಗಳು ನಡೆಯುತ್ತವೆ. ಆ ಸಂದರ್ಭಗಳಲ್ಲಿ ವೇಳಾಪಟ್ಟಿಯನ್ನು ಕೊಡಲಾಗುತ್ತದೆ. ಇವುಗಳಲ್ಲಿ ಭಾಗವಹಿಸುವುದರಿಂದ ಬಿಡುವನ್ನು ಸರಿಯಾಗಿ ಉಪಯೋಗಿಸಬಹುದು. ಹೊಸದನ್ನು ಕಲಿಯುವ ಉತ್ಸಾಹ ಸದಾ ಇರಲಿ.
ಸಂಗೀತೋತ್ಸವ:- ಮೇ ತಿಂಗಳ ಅಂತ್ಯದಲ್ಲಿ ಸಂಗೀತದ ತರಬೇತಿ ನೀಡಲಾಗುತ್ತದೆ. ಇದರ ಪ್ರದರ್ಶನವನ್ನು ಜೂನ್ ತಿಂಗಳಲ್ಲಿ ಏರ್ಪಡಿಸಲಾಗುತ್ತದೆ.
ಸಾಹಿತ್ಯೋತ್ಸವ:- ವರ್ಷದಲ್ಲಿಒಮ್ಮೆ ಪ್ರಸಿದ್ಧ ಸಾಹಿತಿಗಳನ್ನು ಕರೆಸಿ ಕನ್ನಡ ಸಾಹಿತ್ಯದ ಪರಿಚಯ ಮಾಡಿಕೊಡಲಾಗುತ್ತದೆ.
ತಬಲದ ಮತ್ತು ನೃತ್ಯದ ತರಬೇತಿ :- ಎಂಟು ಮತ್ತು ಒಂಬತ್ತನೇ ತರಗತಿ ಮಕ್ಕಳಿಗೆ ವಾರದಲ್ಲಿಎರಡು ದಿನ ತಬಲ ಮತ್ತು ನೃತ್ಯದ ತರಬೇತಿ ನೀಡಲಾಗುತ್ತದೆ. ಆಸಕ್ತರು ಇದರಉಪಯೋಗ ಪಡೆಯಬಹುದು. ಪೋಷಕರ ಸಭೆ-ಪ್ರತಿ ವರ್ಷ ಪೋಷಕರ ಸಭೆ ನಡೆಸಲಾಗುತ್ತದೆ. ಇದರಲ್ಲಿ ಎಲ್ಲ ಪೋಷಕರು ಭಾಗವಹಿಸುವುದು ನಮ್ಮ ಅಪೇಕ್ಷೆ ಇದೊಂದು ಕಡ್ಡಾಯ ಕಾರ್ಯಕ್ರಮ.